作词 : Pradyumna Narahalli
作曲 : Sangeetha Rajeev
ಅಪ್ಪಾ ಅಪ್ಪಾ, ಅನ್ನೋ ನನ್ನ ಕರೆ
ಎಲ್ಲಾ ಗೆಲ್ಲೋ ಆಸರೆ
ಕೇಳೋ ಮುಂಚೆ ಎಲ್ಲಾ ತರೋ ದೊರೆ,
ಇಂದೇತಕೆ ನಿಂತೆ ಮರೆ…
ಕನಸ ಕಾಯುವ ಶಕ್ತಿಯ ತುಂಬಿ ಕೊಟ್ಟೆ
ಒಮ್ಮೆ ನೀ ಎದುರಿಗೆ ಬಾ.. ಬೇಗ ಬಾ…
ಗಾಳಿಯೇ ತಾನಾದರೂ ಉಸಿರಲಿ ಅಪ್ಪಾ…
ತಾರೆಯೇ ತಾನಾದರೂ ಸೂರ್ಯನೇ ಅಪ್ಪಾ…
ಈ ಮನ ನುಡಿಯುತಿದೆ… ನೀನು ಇತ್ತ ತೊದಲಿನಲೇ
ಜೀವನ ನಡೆಯುತಿದೆ… ನೀನು ಕೊಟ್ಟ ಪ್ರೀತಿಯಲೇ
ಆಸೆಯ ಗೆಲ್ಲುವ ಶಕ್ತಿಯ ತುಂಬಿ ಕೊಟ್ಟೆ
ಒಮ್ಮೆ ನೀ ಎದುರಿಗೆ ಬಾ.. ಒಂದೇ ಒಂದು ಸಾರಿ ಬಾ…
ನಾದವೇ ನಂದಾದರೂ ನಾಡಿಯು ಅಪ್ಪಾ…
ಖ್ಯಾತಿಯೇ ನಂದಾದರೂ ಸ್ಫೂರ್ತಿಯು ಅಪ್ಪಾ…
ಗಾಳಿಯೇ ತಾನಾದರೂ ಉಸಿರಲಿ ಅಪ್ಪಾ…
ತಾರೆಯೇ ತಾನಾದರೂ ಸೂರ್ಯನೇ ಅಪ್ಪಾ…
ಅಪ್ಪಾ ನನ್ನ ಅಪ್ಪು ಬಾ..